ಬಾಬು ರಾಜೇಂದ್ರ ಪ್ರಸಾದ್ ಪ್ರೌಢ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪುಸ್ತಕಗಳು, ಲೇಖನ ಸಾಮಗ್ರಿಗಳು, ಶಾಲಾ ಚೀಲಗಳನ್ನು ವಿತರಿಸುವ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ರಾಮನಾಥ್ ಭಟ್ ವಹಿಸಿದ್ದರು. ಹಳೆ ವಿದ್ಯಾರ್ಥಿ ಹಾಗು ದಾನಿಗಳಾದ ಶ್ರೀ ಧೀರಜ್ ಶೆಣೈ ,ಶ್ರೀಮತಿ ನಿವೇದಿತಾ ಧೀರಜ್ ಶೆಣೈ, ಪುಸ್ತಕ ವಿತರಿಸಿ, ‘ನೀಡಿದ ಸವಲತುಗಳನ್ನು ಬಳಸಿ ಉತ್ತಮ ಸಾಧನೆ ಮಾಡಬೇಕೆಂದು ಕರೆನೀಡಿದರು’. ಹಳೆ ವಿದ್ಯಾರ್ಥಿಯಾದ ಕೃತಿಕಾ ಕಾಮತ್, ಶಾಲಾ ಹಿತೈಷಿ ಸುಮಂತ್ ಕಾಮತ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪದ್ಮಜಾ ಸ್ವಾಗತಿಸಿದರು. ಶಿಕ್ಷಕ ಕಿರಣ್ ಕುಮಾರ್ ನಿರ್ವಹಿಸಿ ,ಶಿಕ್ಷಕ ಭರತ್ ವಂದಿಸಿದರು.

 

Comments powered by CComment

Copyright © 2010 - www.brphighschool.org. Powered by eCreators

Contact Us

Babu Rajendra Prasad High School
Moodbidri - 574 227
Karnataka, India
Phone: 91-08258-236835